ಎಸ್​ಐಆರ್ ಮಾಡದಿದ್ದರೆ ಪಶ್ಚಿಮ ಬಂಗಾಳವು ಭಾರತದಲ್ಲಿ ಉಳಿಯುತ್ತಿರಲಿಲ್ಲ: ಶಾಸಕ ಯತ್ನಾಳ್

ಎಸ್​ಐಆರ್ ಮಾಡದಿದ್ದರೆ ಪಶ್ಚಿಮ ಬಂಗಾಳವು ಭಾರತದಲ್ಲಿ ಉಳಿಯುತ್ತಿರಲಿಲ್ಲ: ಶಾಸಕ ಯತ್ನಾಳ್
View on original source
വിഭാഗം: Politics
പങ്കിടുക
ആർക്കൈവ്
ലൈക്ക്
ದಾವಣಗೆರೆ: ಅಜಿತ್ ದೋವಲ್ 7 ವರ್ಷ ಪಾಕಿಸ್ತಾನದಲ್ಲಿ ಮುಸ್ಲಿಂ ಆಗಿ ಕೆಲಸ ಮಾಡಿದ್ದಾರೆ. ಅವರು ದೇಶದ ಆಸ್ತಿ. ಅಂತವರ ಬಗ್ಗೆ ರಾಹುಲ್‌ ಗಾಂಧಿ ಮಾತನಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ಎಸ್​ಐಆರ್ ವಿರುದ್ಧ ಕಾಂಗ್ರೆಸ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಹತಾಷೆಗೊಳಗಾಗಿದ್ದಾರೆ. ಸಂವಿಧಾನಬದ್ದ ಹುದ್ದೆ ಬಗ್ಗೆ ಅಸಾಂವಿಧಾನಿಕವಾಗಿ ಮಾತನಾಡುತ್ತಿದ್ದಾರೆ.‌ ಅಜಿತ್ ದೋವಲ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಜ್ಞಾನೇಶ್ ಕುಮಾರ್ ಒಬ್ಬ ಚುನಾವಣಾ ಆಯೋಗದ ಅಧಿಕಾರಿಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್ ಜಾರಿ ಮಾಡದೇ ಇದ್ದಿದ್ದರೆ ಅದು ಭಾರತದಲ್ಲಿ ಉಳಿಯುತ್ತಿರಲಿಲ್ಲ.‌ ಪಶ್ಚಿಮ ಬಂಗಾಳವು ಹೆಚ್ಚುಕಡಿಮೆ ಬಾಂಗ್ಲಾದೇಶದ ಭಾಗವಾಗಿಬಿಟ್ಟಿತ್ತು. ಅದನ್ನು ಉಳಿಸಿದವರು ಜ್ಞಾನೇಶ್ ಕುಮಾರ್ ಎಂದು ಕಿಡಿಕಾರಿದರು. ಮಲ್ಲಿಕಾರ್ಜುನ್ ಖರ್ಗೆ ಅವರು ಇವಿಎಂ ಬಿಟ್ಟು ಬ್ಯಾಲೆಟ್ ಮಾಡಿ ಎನ್ನುತ್ತಾರೆ. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಇದೇ ಮತಯಂತ್ರದ ಮೂಲಕವೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಹುಲ್ ಗಾಂಧಿಗೆ ಅದನ್ನು ಕೇಳುವ ತಾಕತ್ತಿಲ್ಲ. ಕಾಂಗ್ರೆಸ್ ತಳಮಟ್ಟಕ್ಕೆ ಬಂದಿದೆ, ಮುಂದೆಯೂ ಅಧಿಕಾರಕ್ಕೆ ಬರಲ್ಲ. ನಮ್ಮ ಕಥೆ ಮುಗಿಯಿತು ಎಂಬ ಹತಾಷೆಗೆ ಒಳಗಾಗಿದ್ದಾರೆ. ಚೀನಾ ಪಾಕಿಸ್ತಾನದ ಏಜೆಂಟ್ ಥರ ರಾಹುಲ್ ವರ್ತಿಸುತ್ತಿದ್ದಾರೆ. ಪ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಕೆಲಸಕ್ಕೆ ದೇಶ, ಪ್ರಪಂಚವೇ ಹೆಮ್ಮೆಪಡುತ್ತಿದೆ. ಆದರೆ ಕಾಂಗ್ರೆಸ್​ಗೆ ಒಂದು ಅಭಿನಂದನೆ ಹೇಳುವ ಸೌಜನ್ಯವಿಲ್ಲ. ಕಾಂಗ್ರೆಸ್​ನವರು ವೋಟ್ ಚೋರಿ ಎನ್ನುತ್ತಿದ್ದಾರೆ.‌ ನೆಹರೂ ಕೂಡ ವೋಟ್ ಚೋರಿ ಮಾಡಿ ಗೆದ್ದಿದ್ದಾರೆ. ಈಗ ಬಿಹಾರ, ಬಂಗಾಳದಲ್ಲಿ ಮತಗಟ್ಟೆ ಕಬ್ಜ ಮಾಡಲು ಹೊರಟಿದ್ದಾರೆ ಎಂದು ದೂರಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮೇಲೆ ಕೇರಳದಲ್ಲಿ ಹಳೇ ಕೇಸ್ ರೀಓಪನ್ ಆಗಿರುವ ಬಗ್ಗೆ ಮಾತನಾಡಿ, ಯಾರ ಮೇಲೆ ಆರೋಪ ಇಲ್ಲ ಹೇಳಿ, ಬಹಳ ಮಂದಿ ಮೇಲೆ ಹಗರಣಗಳು ಇವೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮೇಲೆಯೂ ಪ್ರಕರಣಗಳಿವೆ ಎಂದರು. ಬಿಜೆಪಿಯ ನಾಯಕರು ಯಾರು ಹಿಂದೂಗಳ ಪರ ಗಟ್ಟಿಯಾಗಿ ನಿಲ್ಲುತ್ತಾರೆ, ಯಾರು ಹಿಂದೂಗಳ ಪರ ಗಟ್ಟಿ ಇದ್ದಾರೆ ಅಂತ ಮಾಧ್ಯಮದವರು ಬೆಳಕಿಗೆ ತರಬೇಕು. ನಮ್ಮ ಜೊತೆ ಎಲ್ಲಾ ಲಿಂಗಾಯತ ಸಮುದಾಯ ಇದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆಗ ಮೇಲಿನವರು ಕಣ್ಣು ತೆರೆಯುತ್ತಾರೆ ಎಂದು ತಮ್ಮ ಪಕ್ಷದ ನಾಯಕರ ವಿರುದ್ದವೇ ಯತ್ನಾಳ್​ ಪರೋಕ್ಷವಾಗಿ ಟಾಂಗ್ ನೀಡಿದರು. ಸಾಮಾಜಿಕ ನ್ಯಾಯ ಇಲ್ಲದೇ ಒಬ್ಬರನ್ನೇ ಮೆರೆಸಿಕೊಂಡು ಒಡಾಡಿದರೆ ಪಕ್ಷ ಹಾಳಾಗಲಿದೆ. ನಮ್ಮ ಕೇಂದ್ರ ನಾಯಕರು 1989ರಲ್ಲಿ ಹೇಗಿತ್ತೋ ಅದನ್ನೇ ಯೋಚನೆ ಮಾಡುತ್ತಿದ್ದಾರೆ. ನಾನು ದೊಡ್ಡ ಬಸ್ ಹಾಕಿಕೊಂಡು ಓಡಾಡುತ್ತಿದ್ದೇನೆ ಎಂದು ಹೇಳುತ್ತಿದ್ದೀರಿ. ನಾನು ಬಸ್ ತೆಗೆದುಕೊಂಡು ಓಡಾಡಿದ್ದಕ್ಕೆ ಹುಚ್ಚ ಎಂದು ಕೆಲವರು ಹೇಳಿದ್ದಾರೆ. ನಾನು ಕೂಡ ಮುಂದೆ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡುವ ಕಾಲ ಬಂದೇ ಬರುತ್ತದೆ. ಈಗ ನಾನು ಏನೇ ಹೇಳಿದರೂ ಅದನ್ನು ನೀವು ವಿವಾದಾತ್ಮಕ ಹೇಳಿಕೆ ಎಂದುಕೊಳ್ಳುತ್ತೀರಿ‌ ಎಂದರು. ಮಾಜಿ ಸಿಎಂ ಸಿದ್ದರಾಮಯ್ಯ ಚುನಾವಣಾ ರಾಜಕೀಯದ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿ, ಇಷ್ಟು ದಿನ ಮಜಾ ಮಾಡಿ ಈಗ ಸಾಕಷ್ಟು ನೋವು ಆಗಿದೆ ಎಂದು ಹೇಳುತ್ತಿದ್ದಾರೆ.‌ ಸಿದ್ದರಾಮಯ್ಯ ಬಹುದೊಡ್ಡ ಸಮಾಜದಿಂದ ಬಂದ ಮಹಾನ್ ವ್ಯಕ್ತಿ. ಅವರ ಆರ್ಥಿಕ ನೀತಿ ಸಾಕಷ್ಟು ಉತ್ತಮವಾಗಿತ್ತು. ನಾವು ನೋಡಿದ್ದೇವೆ. ಆದರೆ ಅಂತಹ ಸಿದ್ದರಾಮಯ್ಯನವರ ಮೂರ್ತಿಯನ್ನು ಈ ಕಾಂಗ್ರೆಸ್​ನವರು ತಿಪ್ಪೆಗೆ ಹಾಕಿದ್ದಾರೆ. ಸಿದ್ದರಾಮಯ್ಯನವರಿಗೆ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಬಿಟ್ಟು ಹೊರ ಬರಬೇಕು ಎಂದು ಹೇಳಿದರು. ತಮಿಳುನಾಡಿನ ಟಿವಿಕೆಯಂತೆ ಯತ್ನಾಳ್ ಪಕ್ಷ ಕೂಡ ಹೊರಹೊಮ್ಮುತ್ತದೆ.‌ ಯತ್ನಾಳ್ ಪಕ್ಷವೇ ಮುಂದೆ ಬಂದಿದೆ ಎಂದು ಮಾಧ್ಯಮದಲ್ಲೇ ಬರುತ್ತೆ ನೋಡಿ. ಕಾಂಗ್ರೆಸ್​ನವರು ಹಾಗೂ ಕೆಲವರು ಠೇವಣಿ ಕೂಡ ಕಳೆದುಕೊಳ್ಳುತ್ತಾರೆ. ಆಗ ನನ್ನ ಬಗ್ಗೆ ನಿಮ್ಮ ಚಾನಲ್, ಪೇಪರ್​ಗಳಲ್ಲಿ ಹೊಗಳುತ್ತೀರಿ ಎಂದು ಯತ್ನಾಳ್ ತಿಳಿಸಿದರು. ಇದನ್ನೂ ಓದಿ: ಕರ್ನಾಟಕ, ಕೇರಳದಲ್ಲೂ ವೋಟ್ ಚೋರಿ ಆಗಿರಬೇಕು ಅಲ್ವಾ, ನಿಮ್ಮ ಸಿಎಂಗಳಿಗೆ ರಾಜೀನಾಮೆ ಕೊಡಿಸಿ: ಛಲವಾದಿ ನಾರಾಯಣಸ್ವಾಮಿ

(0)കമന്റുകൾ

 

കുക്കികളെക്കുറിച്ചുള്ള ഒരു കുറിപ്പ്

നിങ്ങളെ സൈൻ ഇൻ ചെയ്ത നിലയിൽ നിലനിർത്താനും നിങ്ങളുടെ ഭാഷയും രാജ്യവും ഓർമ്മിക്കാനും Newshunt ആവശ്യമായ കുക്കികൾ ഉപയോഗിക്കുന്നു. നിങ്ങളുടെ അനുമതിയോടെ, ആളുകൾ Newshunt എങ്ങനെ ഉപയോഗിക്കുന്നുവെന്ന് മനസ്സിലാക്കാനും കാലക്രമേണ സേവനം മെച്ചപ്പെടുത്താനും അനലിറ്റിക്സ് കുക്കികളും ഉപയോഗിക്കാൻ ഞങ്ങൾ ആഗ്രഹിക്കുന്നു.

അംഗീകരിക്കുന്നത് അനലിറ്റിക്സിനെ മാത്രമേ ബാധിക്കൂ. കൂടുതൽ വിവരങ്ങൾക്ക് ഞങ്ങളുടെ സ്വകാര്യതാ നയം or നിബന്ധനകളും വ്യവസ്ഥകളും.