ಬೆಂಗಳೂರು: ಆಹಾರ ಸುರಕ್ಷತೆಗೆ ಸಂಬಂಧಿಸಿದ ಗ್ರಾಹಕರ ದೂರುಗಳನ್ನು ವೇಗವಾಗಿ ಸ್ವೀಕರಿಸಿ ಪರಿಹರಿಸುವ ಉದ್ದೇಶದಿಂದ ಖಾಸಗಿ ಕಂಪನಿಯೊಂದು ಪ್ರತ್ಯೇಕ ಗ್ರಾಹಕ ಬೆಂಬಲ ವ್ಯವಸ್ಥೆ ಮತ್ತು 24x7 ಸಹಾಯವಾಣಿ ಆರಂಭಿಸಿದೆ. ಗ್ರಾಹಕರು 7948231850 ಸಂಖ್ಯೆಗೆ ಕರೆ ಮಾಡಿ ನೇರವಾಗಿ ಗ್ರಾಹಕ ಸೇವಾ ಪ್ರತಿನಿಧಿಗಳ ಬಳಿ ಆಹಾರ ಸುರಕ್ಷತಾ ಸಂಬಂಧಿತ ದೂರುಗಳನ್ನು ದಾಖಲಿಸ ಬಹುದು.
ಇದರ ಜೊತೆಗೆ, ಖಾಸಗಿ ಕಂಪನಿಯು ತನ್ನ ಆಪ್‌ನ Help ವಿಭಾಗದಲ್ಲಿ ಪ್ರತ್ಯೇಕ 'Food Safety' ಚಾನಲ್ ಪರಿಚಯಿಸಿದೆ. ಆರ್ಡರ್‌ಗೆ ಸಂಬಂಧಿಸಿದ ಆಹಾರ ಸುರಕ್ಷತಾ ಸಮಸ್ಯೆ ಗಳನ್ನು ಗ್ರಾಹಕರು ಸುಲಭವಾಗಿ ವರದಿ ಮಾಡಲು ಈ ವ್ಯವಸ್ಥೆ ಸಹಾಯ ಮಾಡಲಿದೆ.
ಆಪ್‌ನಲ್ಲಿನ ಈ ವಿಭಾಗದ ಮೂಲಕ ಗ್ರಾಹಕರು ತಮ್ಮ ದೂರು ಅಥವಾ ಕಳವಳವನ್ನು ಸಣ್ಣ ಸಂದೇಶದ ರೂಪದಲ್ಲಿ ಹಂಚಿಕೊಳ್ಳಬಹುದು. ಜೊತೆಗೆ, ಸಮಸ್ಯೆಗೆ ಸಂಬಂಧಿಸಿದ ಚಿತ್ರಗಳನ್ನೂ ಅಪ್‌ಲೋಡ್ ಮಾಡಬಹುದು. ದೂರು ದಾಖಲಾದ ನಂತರ, ಅದರ ಸ್ಥಿತಿಯನ್ನು ತಿಳಿದುಕೊಳ್ಳಲು ಗ್ರಾಹಕರಿಗೆ ಟಿಕೆಟ್ ಸಂಖ್ಯೆ ನೀಡಲಾಗುತ್ತದೆ.
ಇದನ್ನೂ ಓದಿ: Bescom Helpline: ವಿದ್ಯುತ್ ಸಮಸ್ಯೆಗಳಿಗೆ 1912 ಅಥವಾ ʼವಾಟ್ಸ್ ಆ್ಯಪ್ʼ ಸಹಾಯವಾಣಿಗೆ ದೂರು ದಾಖಲಿಸಿ: ಬೆಸ್ಕಾಂ
ಸಹಾಯವಾಣಿ ಮೂಲಕ ದೂರು ದಾಖಲಿಸುವ ಗ್ರಾಹಕರಿಗೂ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್ ಕಳುಹಿಸಲಾಗುತ್ತದೆ. ಆ ಲಿಂಕ್ ಮೂಲಕ ಅವರು ಸಮಸ್ಯೆಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಳ್ಳಬಹುದು. ಈ ಎರಡೂ ಮಾರ್ಗಗಳಿಂದ ಬಂದ ದೂರುಗಳನ್ನು ಫುಡ್ ಡೆಲಿವರಿ ಸಂಸ್ಥೆಯ ಫುಡ್ ಸೇಫ್ಟಿ ಅಶ್ಯುರೆನ್ಸ್ ತಂಡ ಆದ್ಯತೆಯ ಮೇರೆಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ.
ಈ ಕುರಿತು ಖಾಸಗಿ ಕಂಪನಿಯ ಫುಡ್ ಮಾರ್ಕೆಟ್‌ಪ್ಲೇಸ್‌ನ ಮುಖ್ಯ ವ್ಯವಹಾರ ಅಧಿಕಾರಿ ಸಿದ್ಧಾರ್ಥ್ ಭಾಕೂ ಮಾತನಾಡಿ, 'ಆಹಾರ ಸುರಕ್ಷತೆ ವಿಚಾರದಲ್ಲಿ ನಾವು ರೆಸ್ಟೋರೆಂಟ್ ಪಾಲುದಾರರೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಅದೇ ವೇಳೆ, ಗ್ರಾಹಕರು ತಮ್ಮ ಕಳವಳಗಳನ್ನು ಸುಲಭ ವಾಗಿ ತಿಳಿಸಲು ಹೆಚ್ಚುವರಿ ಸಂಪರ್ಕ ಮಾರ್ಗಗಳನ್ನು ಒದಗಿಸುತ್ತಿದ್ದೇವೆ. ಗ್ರಾಹಕರ ಪ್ರತಿಕ್ರಿಯೆ ನಮ್ಮ ಕಾರ್ಯವಿಧಾನದ ಪ್ರಮುಖ ಭಾಗವಾಗಿದೆ. ಈ ಹೊಸ ವ್ಯವಸ್ಥೆಗಳು ಎಲ್ಲಿಯೇ ಅಂತರ ಕಂಡುಬಂದರೂ ಅದನ್ನು ಗುರುತಿಸಿ ಪರಿಹರಿಸಲು ನೆರವಾಗಲಿವೆ,' ಎಂದರು.
ಖಾಸಗಿ ಕಂಪನಿ ಪ್ರಕಾರ, ಈ ಪ್ರತ್ಯೇಕ ಸಹಾಯವಾಣಿ ಮತ್ತು ಆಪ್ ಚಾನಲ್ ಕಂಪನಿಗೆ ಪ್ರಮುಖ ಮಾಹಿತಿ ಸಂಗ್ರಹಣಾ ಸಾಧನವಾಗಿಯೂ ಕಾರ್ಯನಿರ್ವಹಿಸಲಿದೆ. ಮರುಕಳಿಸುವ ದೂರುಗಳನ್ನು ಗುರುತಿಸು ವುದು, ಸಮಸ್ಯೆಗಳ ಮಾದರಿಗಳನ್ನು ಪತ್ತೆಹಚ್ಚುವುದು, ರೆಸ್ಟೋರೆಂಟ್ ಪಾಲುದಾರರೊಂದಿಗೆ ಚರ್ಚಿಸಿ ತಡೆಗಟ್ಟುವ ಕ್ರಮಗಳನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.
ಖಾಸಗಿ ಕಂಪನಿಯು ತನ್ನ ರೆಸ್ಟೋರೆಂಟ್ ಪಾಲುದಾರರೊಂದಿಗೆ ಉತ್ತಮ ಗುಣಮಟ್ಟದ ಪದಾರ್ಥ ಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಜೊತೆಗೆ, ಮೆನು ವಿವರಗಳಲ್ಲಿ ಆಹಾರದ ಗುಣಮಟ್ಟ ಮತ್ತು ಪದಾರ್ಥಗಳ ಮಾಹಿತಿ ಸರಿಯಾಗಿ ಪ್ರತಿಬಿಂಬಿಸುವಂತೆ ಗಮನ ಹರಿಸುತ್ತಿದೆ. ಕಂಪನಿಯು ಪಾಲು ದಾರರಿಗೆ ಸ್ವಚ್ಛತಾ ಕ್ರಮಗಳು ಮತ್ತು ಆಹಾರ ಸುರಕ್ಷತಾ ಮಾನದಂಡಗಳ ಕುರಿತು ಕಾಲಕಾಲಕ್ಕೆ ಜಾಗೃತಿ ಮೂಡಿಸುತ್ತಿದೆ.
(0)Comments