ಮಧು ಬಂಗಾರಪ್ಪ, ರಾಘವೇಂದ್ರ ಮುಖಾಮುಖಿ - ನಂತರ ಆಗಿದ್ದೇನು ಗೊತ್ತಾ?

ಮಧು ಬಂಗಾರಪ್ಪ, ರಾಘವೇಂದ್ರ ಮುಖಾಮುಖಿ - ನಂತರ ಆಗಿದ್ದೇನು ಗೊತ್ತಾ?
View on original source
Category: Politics
Share
Archive
Like
ಶಿಕಾರಿಪುರ (ಶಿವಮೊಗ್ಗ): ಮಲೆನಾಡಿನ ರಾಜಕೀಯ ಕೇಂದ್ರಬಿಂದು ಶಿಕಾರಿಪುರದಲ್ಲಿ ಇಂದು ಹೈಡ್ರಾಮಾ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಮುಖಾಮುಖಿಯಾದ ವೇದಿಕೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘೋಷಣೆಗಳ ಸಮರವೇ ನಡೆದಿದೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮಧು ಬಂಗಾರಪ್ಪ ಅವರನ್ನು 'ಮುಂದಿನ ಮುಖ್ಯಮಂತ್ರಿ' ಎಂದು ಕೂಗಿದ್ದು ವಿಶೇಷವಾಗಿತ್ತು. ಶಿಕಾರಿಪುರದಲ್ಲಿ ನಡೆದ 'ಪ್ರಜಾಸೇವಾ ಆಂದೋಲನ' ಸಭೆಯಲ್ಲಿ ಈ ಘಟನೆ ನಡೆದಿದೆ. ಸಭೆಗೆ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಆಗಮಿಸುತ್ತಿದ್ದಂತೆಯೇ ಎರಡೂ ಪಕ್ಷದ ಕಾರ್ಯಕರ್ತರು ಅಲರ್ಟ್ ಆದರು. ಮೊದಲು ಬಿಜೆಪಿ ಕಾರ್ಯಕರ್ತರು ಸಂಸದ ರಾಘವೇಂದ್ರ ಅವರ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಸಡ್ಡು ಹೊಡೆದ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಮಧು ಬಂಗಾರಪ್ಪ ಅವರ ಪರವಾಗಿ ಜೈಕಾರ ಹಾಕಿದರು. ಕೈ ಕಾರ್ಯಕರ್ತರ ಉತ್ಸಾಹ ಇಷ್ಟಕ್ಕೇ ನಿಲ್ಲಲಿಲ್ಲ. ಸಂಸದ ಬಿ.ವೈ. ರಾಘವೇಂದ್ರ ಅವರು ವೇದಿಕೆಯ ಮೇಲಿರುವಾಗಲೇ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಮಧು ಬಂಗಾರಪ್ಪ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದು ಸ್ಥಳದಲ್ಲಿದ್ದವರ ಗಮನ ಸೆಳೆಯಿತು. ಶಿಕಾರಿಪುರದಲ್ಲಿ ರಾಘವೇಂದ್ರ ಅವರ ಸಮ್ಮುಖದಲ್ಲೇ ಈ ರೀತಿ ಘೋಷಣೆಗಳು ಮೊಳಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಾರ್ಯಕರ್ತರ ಘೋಷಣೆಗಳ ಅಬ್ಬರ ಜೋರಾಗುತ್ತಿದ್ದಂತೆ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ತಕ್ಷಣವೇ ಎಚ್ಚೆತ್ತುಕೊಂಡರು. ಇಬ್ಬರೂ ನಾಯಕರು ಜಂಟಿಯಾಗಿ ಬಂದು ತಮ್ಮ ತಮ್ಮ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಘೋಷಣೆ ಕೂಗದಂತೆ ಸೂಚನೆ ನೀಡಿದರು. ನಾಯಕರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು. ಒಟ್ಟಾರೆಯಾಗಿ, ಅಭಿವೃದ್ಧಿ ಕೆಲಸಗಳ ಚರ್ಚೆಗಾಗಿ ನಡೆದ ಸಭೆಯಲ್ಲಿ ಕಾರ್ಯಕರ್ತರ ಉತ್ಸಾಹವು ಘೋಷಣೆಗಳ ಸಮರವಾಗಿ ಬದಲಾಗಿದ್ದು ಕಂಡುಬಂದಿತು. ಆದರೆ, ನಾಯಕರು ತೋರಿದ ಪರಸ್ಪರ ಗೌರವ ಮತ್ತು ಸಂಯಮವು ಸಭೆ ಸುಗಮವಾಗಿ ನಡೆಯಲು ಸಹಕಾರಿಯಾಯಿತು. ರಾಜ್ಯ ಪರಿಷತ್‌ಗೆ ಕೆಲವು ಮಹತ್ವದ ಶಿಫಾರಸು ಕಳಿಸಲು ನಿರ್ಧಾರ, ಎಸ್‌ಸಿಎಸ್‌/ಟಿಎಸ್‌ಪಿ ಪರಿಶೀಲನಾ ಸಭೆ ನನಸಾಗುವತ್ತ ಭದ್ರಾ ಮೇಲ್ದಂಡೆ ಯೋಜನೆಯ ಸುದೀರ್ಘ ಕನಸು, ಭದ್ರೆ ಹರಿವಿಗೆ ಚಾಲನೆ ನೀಡಿದ ಸಚಿವ ಕರ್ನಾಟಕದಲ್ಲಿ ಘಟಕ ಆರಂಭಿಸಿ: ಫ್ರಾನ್ಸ್‌ನ 5 ಕಂಪನಿಗಳಿಗೆ ಸಚಿವ ಎಂ.ಬಿ ಪಾಟೀಲ ಆಹ್ವಾನ ಬೆಂಗಳೂರಲ್ಲಿ BRE ಶೃಂಗಸಭೆ, ಕರ್ನಾಟಕದ ಶುದ್ಧ ಇಂಧನ ಸಾಮರ್ಥ್ಯಕ್ಕೆ ರಾಷ್ಟ್ರೀಯ ಮನ್ನಣೆ

(0)Comments

 

A note on cookies

Newshunt uses essential cookies to keep you signed in and to remember your language and country, so the site works the way you expect. With your permission, we'd also like to use analytics cookies to understand how people use Newshunt and improve it over time.

Accepting only affects analytics. To learn more, view our Privacy Policy or Terms & Conditions.