BCCI ಖಜಾನೆಗೆ ಕುಬೇರನ ಕೃಪೆ: ChatGPT ಜೊತೆ ಬಿಗ್ ಡೀಲ್, ಒಂದೊಂದು ಪಂದ್ಯಕ್ಕೂ ಕೋಟಿ ಕೋಟಿ ಹಣ

BCCI ಖಜಾನೆಗೆ ಕುಬೇರನ ಕೃಪೆ: ChatGPT ಜೊತೆ ಬಿಗ್ ಡೀಲ್, ಒಂದೊಂದು ಪಂದ್ಯಕ್ಕೂ ಕೋಟಿ ಕೋಟಿ ಹಣ
View on original source
Category: Sports
Share
Archive
Like
ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈಗ ಇನ್ನಷ್ಟು ಶ್ರೀಮಂತವಾಗಲಿದೆ. ಭಾರತದಲ್ಲಿ ನಡೆಯಲಿರುವ ಸರಣಿಗಳಿಗಾಗಿ ಬಿಸಿಸಿಐ ಬರೋಬ್ಬರಿ 130 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬಾರಿ ವಿಶೇಷವೆಂದರೆ ಕೃತಕ ಬುದ್ಧಿಮತ್ತೆ (AI) ದೈತ್ಯ 'ಚಾಟ್‌ಜಿಪಿಟಿ' (ChatGPT) ಕೂಡ ಬಿಸಿಸಿಐ ಜೊತೆ ಕೈಜೋಡಿಸಿದೆ. ಭಾರತದಲ್ಲಿ ನಡೆಯಲಿರುವ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳಿಗಾಗಿ ಬಿಸಿಸಿಐ ಮೂರು ಪ್ರಮುಖ ಕಂಪನಿಗಳನ್ನು 'ಅಸೋಸಿಯೇಟ್ ಪಾರ್ಟ್ನರ್ಸ್ ಆಗಿ ನೇಮಿಸಿಕೊಂಡಿದೆ. ಅವುಗಳೆಂದರೆ.. ಈ ಹೊಸ ಒಪ್ಪಂದವು ಮಾರ್ಚ್ 2028 ರವರೆಗೆ ಚಾಲ್ತಿಯಲ್ಲಿರುತ್ತದೆ. ಗಮನಾರ್ಹ ಸಂಗತಿಯೆಂದರೆ..ಕಳೆದ ಬಾರಿಗಿಂತ ಈ ಬಾರಿ ಬಿಸಿಸಿಐಗೆ ಬರುವ ಹಣದಲ್ಲಿ ಶೇ. 44 ರಷ್ಟು ಭಾರಿ ಏರಿಕೆಯಾಗಿದೆ. ಕೇವಲ ಎರಡು ಸೀಸನ್‌ಗಳಿಗಾಗಿ 130 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಈ ಕಂಪನಿಗಳು ಬಿಸಿಸಿಐಗೆ ಪಾವತಿಸಲಿವೆ. ಭಾರತದ ನೆಲದಲ್ಲಿ ನಡೆಯುವ ಒಂದೊಂದು ಪಂದ್ಯದಿಂದಲೂ ಬಿಸಿಸಿಐಗೆ ಈಗ ಕೋಟಿ ಕೋಟಿ ಹಣ ಹರಿದು ಬರಲಿದೆ. ಇದುವರೆಗೆ ಪಾನೀಯ, ವಿಮೆ ಅಥವಾ ಬ್ಯಾಂಕಿಂಗ್ ಕ್ಷೇತ್ರಗಳು ಕ್ರಿಕೆಟ್ ಜೊತೆ ಗುರುತಿಸಿಕೊಂಡಿದ್ದವು. ಆದರೆ ಇದೇ ಮೊದಲ ಬಾರಿಗೆ ತಂತ್ರಜ್ಞಾನ ಲೋಕದ ಸಂಚಲನ 'ಚಾಟ್‌ಜಿಪಿಟಿ' ಕ್ರಿಕೆಟ್ ಮೈದಾನಕ್ಕೆ ಎಂಟ್ರಿ ಕೊಟ್ಟಿದೆ. ಇದು ಭಾರತೀಯ ಕ್ರಿಕೆಟ್‌ನ ಮಾರುಕಟ್ಟೆ ಮೌಲ್ಯ ಎಷ್ಟು ದೊಡ್ಡದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್, ಭಾರತದ ಮಣ್ಣಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಇರುವ ಬೇಡಿಕೆಯನ್ನು ಈ ಒಪ್ಪಂದ ಸಾಬೀತುಪಡಿಸಿದೆ. ಪ್ರಮುಖ ಬ್ರ್ಯಾಂಡ್‌ಗಳು ಬಿಸಿಸಿಐ ಮತ್ತು ಟೀಮ್ ಇಂಡಿಯಾ ಮೇಲೆ ಇಟ್ಟಿರುವ ನಂಬಿಕೆಗೆ ಈ 130 ಕೋಟಿ ರೂ. ಡೀಲ್ ಒಂದು ದೊಡ್ಡ ಉದಾಹರಣೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಸರಣಿಯಿಂದ ಈ ಹೊಸ ಒಪ್ಪಂದ ಜಾರಿಗೆ ಬರಲಿದೆ. ಇದಲ್ಲದೆ, ಸೆಪ್ಟೆಂಬರ್ 13 ರಿಂದ 17 ರವರೆಗೆ ಅಫ್ಘಾನಿಸ್ತಾನ ವಿರುದ್ಧ ದೆಹಲಿಯಲ್ಲಿ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇನ್ನೊಂದೆಡೆ ಭಾರತೀಯ ಮಹಿಳಾ ತಂಡ ದುಬೈನಲ್ಲಿ ಏಷ್ಯಾ ಕಪ್ ಆಡುತ್ತಿದ್ದು, ಈಗಾಗಲೇ ನಾಕೌಟ್ ಹಂತ ತಲುಪಿದೆ. ಈ ಎಲ್ಲಾ ಸರಣಿಗಳ ಮೂಲಕ ಬಿಸಿಸಿಐ ತನ್ನ ವಾಣಿಜ್ಯ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದೆ. ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

(0)Comments

 

A note on cookies

Newshunt uses essential cookies to keep you signed in and to remember your language and country, so the site works the way you expect. With your permission, we'd also like to use analytics cookies to understand how people use Newshunt and improve it over time.

Accepting only affects analytics. To learn more, view our Privacy Policy or Terms & Conditions.