Duleep Trophy Final: ಆರು ವಿಕೆಟ್‌ ಕಳೆದುಕೊಂಡ ದಕ್ಷಿಣ ವಲಯ ತಂಡಕ್ಕೆ ತಿಲಕ್‌ ವರ್ಮಾ ಆಸರೆ!

Duleep Trophy Final: ಆರು ವಿಕೆಟ್‌ ಕಳೆದುಕೊಂಡ ದಕ್ಷಿಣ ವಲಯ ತಂಡಕ್ಕೆ ತಿಲಕ್‌ ವರ್ಮಾ ಆಸರೆ!
View on original source
Category: Sports
Share
Archive
Like
ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಯ ಫೈನಲ್‌ ಪಂದ್ಯದ (East Zone vs South Zone) ಮೂರನೇ ದಿನವೂ ಇಶಾನ್‌ ಕಿಶನ್‌ ನಾಯಕತ್ವದ ಪೂರ್ವ ವಲಯ ಎದುರಾಳಿ ದಕ್ಷಿಣ ವಲಯ ಎದುರು ಮೇಲುಗೈ ಸಾಧಿಸಿದೆ. ಇದಕ್ಕೆ ಬಹುಮುಖ್ಯ ಕಾರಣ ಟೀಮ್‌ ಇಂಡಿಯಾ ವೇಗಿಗಳಾದ ಮೊಹಮ್ಮದ್‌ ಶಮಿ (Mohammed Shami) ಹಾಗೂ ಮುಖೇಶ್‌ ಕುಮಾರ್‌. ಮೂರನೇ ದಿನ ಶಮಿ ಹಾಗೂ ಮುಖೇಶ್‌ ಮಾರಕ ದಾಳಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ದಕ್ಷಿಣ ವಲಯದ ಆರಂಭಿಕ ಹಿನ್ನಡೆಯನ್ನು ಅನುಭವಿಸುವಂತೆ ಮಾಡಿದರು. ಪಂದ್ಯದ ಮೂರನೇ ದಿನವಾದ ಮಂಗಳವಾರ ಬೆಳಿಗ್ಗೆ ಪ್ರಥಮ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ವಲಯ ತಂಡಕ್ಕೆ ಉತ್ತಮ ಆರಂಔ ಸಿಗಲಿಲ್ಲ. ರಿಕಿ ಭುಯಿ ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಆದರೆ, ದೇವದತ್‌ ಪಡಿಕ್ಕಲ್‌ ಹಾಗೂ ತಿಲಕ್‌ ವರ್ಮಾ ಅರ್ಧಶತಕಗಳ ಬಲದಿಂದ ದಕ್ಷಣ ವಲಯ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ 80 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 242 ರನ್‌ಗಳನ್ನು ಕಲೆ ಹಾಕಿದ್ದು, ಇನ್ನೂ 466 ರನ್‌ಗಳ ಹಿನ್ನಡೆಯಲ್ಲಿದೆ. ತಿಲಕ್‌ ವರ್ಮಾ ಅವರು 133 ಎಸೆತಗಳಲ್ಲಿ ಅಜೇಯ 56 ರನ್‌ಗಳನ್ನು ಕಲೆ ಹಾಕಿ ದಕ್ಷಿಣ ವಲಯ ತಂಡಕ್ಕೆ ಆಸೆಯಾಗಿದ್ದಾರೆ.

(0)Comments

 

A note on cookies

Newshunt uses essential cookies to keep you signed in and to remember your language and country, so the site works the way you expect. With your permission, we'd also like to use analytics cookies to understand how people use Newshunt and improve it over time.

Accepting only affects analytics. To learn more, view our Privacy Policy or Terms & Conditions.